ಅರೆ ಕತ್ತಲೆಯ ಏಕಾ೦ತದಲಿ
ಗೋಡೆಯೊಡನೆ ಬೆರೆತುಹೋದೆಹಲವು
ಕನಸುಗಳೊಡನೆ
ನನ್ನ ನಾ ಮರೆತುಹೋದೆ!
ಸುಮ್ಮನಿರದು ಜೀವ
ಬಯಕೆಗಳೊಡನೆ ನಡೆದಿದೆ ಭಾವ
ಯೋಚನೆಗಳೊಡನೆ ತಲ್ಲೀನಳಾಗಿ
ಸ್ಥಬ್ಧವಾದೆ
ನಿ೦ತಲ್ಲಿಯೇ ಕ೦ಬವಾದೆ.
ನುಡಿಯತೊಡಗಿತು
ಕಲ್ಲಿನೊಳಗಿನ ದನಿ
ವರುಷಗಳ ಹಿ೦ದೆ
ನಿನ್ನ೦ತೆಯೇ ಯಾರೋ ಜೊತೆಯಾದರು
ಕೆಲಕ್ಷಣದಲಿ ಮರೆಯಾದರು
ನೆನಪಿಸಿತು ತನ್ನೊಳಗೆ
ಕ೦ಬನಿಯ ಕಾಣಿಸದೆಕರಗಿತು
ಕಲ್ಲು ನನಗರಿವಿಲ್ಲದೆ
ಮರುಕ್ಷಣವೇ ಮರಳಿದೆನು
ಜಗದೆಡೆಗೆ, ಪೂರ್ಣ ಬೆಳಕಿನೆಡೆಗೆ...
-ಲಕ್ಷ್ಮಿ ವಾರಣಾಶಿ
Tuesday, 5 May 2009
Subscribe to:
Post Comments (Atom)
I found this poem on internet at www.kendasampige.com (Thanks to Ashoka who guided me to this website)
ReplyDeleteLakshmi is yet to join this group. Hope it happens soon and she will have loads of poems to post in our blogspot.
Thanks Lakshmi.